Ramoji-short-film-festival-RFS

ರಾಮೋಜಿ ಕಿರುಚಿತ್ರೋತ್ಸವ (RSF)

ಕಿರುಚಿತ್ರಗಳು ಸಿನಿಮಾದ ಶೈಲಿಯನ್ನು ಉತ್ತೇಜಿಸುತ್ತಿರುವ ಒಂದು ರೋಚಕ ಮತ್ತು ನಿರಂತರವಾಗಿ ವಿಕಸನಗೊಳ್ಳುತ್ತಿರುವ ಕಥೆ ಹೇಳುವ ವಿಧಾನ. ಕಡಿಮೆ-ವೆಚ್ಚದ ತಂತ್ರಜ್ಞಾನ ಮತ್ತು ಅದರ ಸುಲಭ ಲಭ್ಯತೆ ಒಬ್ಬರ ಸುಪ್ತ ಪ್ರತಿಭೆಯ ಅಭಿವ್ಯಕ್ತಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ.

ಸೃಜನಾತ್ಮಕತೆಯನ್ನು ಹೊಂದಿರುವವರು ಹೆಚ್ಚೆಚ್ಚು ಕಿರುಚಿತ್ರಗಳನ್ನು ಅಪ್ಪಿಕೊಳ್ಳುತ್ತಿದ್ದಾರೆ. ಡಿಜಿಟಲ್ ಸ್ಫೋಟ ಮತ್ತು ಸಾಮಾಜಿಕ ಮಾಧ್ಯಮ ಕ್ರಾಂತಿಯು ಉತ್ಸುಕರಿಗೆ ಅವಕಾಶಗಳ ಜಗತ್ತನ್ನೇ ತೆರೆದಿಡುತ್ತಿದೆ. ಅವರಿಗೆ ಅಗತ್ಯವಿರುವುದು ಅವರ ಅಭಿವ್ಯಕ್ತಿಗೆ ಒಂದು ಸ್ಥಳ, ಮನ್ನಣೆಯ ವೇದಿಕೆ ಮತ್ತು ಹುರಿದುಂಬಿಸುವಿಕೆ.

ರಾಮೋಜಿ ಕಿರುಚಿತ್ರೋತ್ಸವ (RSF) ಪ್ರತಿಭಾವಂತರಿಗೆ ತಮ್ಮ ಸೃಜನಶೀಲ ಶ್ರೇಷ್ಠತೆಯನ್ನು ಪ್ರದರ್ಶಿಸಲು ಮತ್ತು ಕಲೆಯ ಕಠಿಣತೆಯನ್ನು ಪರೀಕ್ಷಿಸಲು ಒಂದು ವೇದಿಕೆಯಾಗಿದೆ. ಈ ಸ್ಪರ್ಧೆಗಳು ಕಲ್ಪನೆಯ ಕಿಡಿಯನ್ನು ಸಂಭ್ರಮಿಸುತ್ತಾ ಅಭಿವ್ಯಕ್ತಿ ಮತ್ತು ಅನ್ವೇಷಣೆಯ ಪ್ರಕ್ರಿಯೆಯ ಅಂಚನ್ನು ದೂಡುತ್ತದೆ.

ರಾಮೋಜಿ ಕಿರುಚಿತ್ರ ಸ್ಪರ್ಧೆಗಳು RAM ಆಯೋಜಿಸುವ ಚಲನಚಿತ್ರೋತ್ಸವದ ಭಾಗವಾಗಿವೆ. ಈ ಸ್ಪರ್ಧೆಗಳು ಆಯ್ದ ಭಾಷೆ- ಹಿಂದಿ, ಬಾಂಗ್ಲಾ, ಮರಾಠಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಗಳಲ್ಲಿ ತಯಾರಾದ ಕಿರುಚಿತ್ರಗಳಿಗೆ ಮುಕ್ತವಾಗಿರುತ್ತವೆ. ಮೂಲಕಥಾ ಕಲ್ಪನೆ ಹಾಗೂ ಪ್ರಾದೇಶಿಕ ಪರಿಮಳದಲ್ಲಿ ಬೇರೂರಿರುವ ಸಾರ್ವತ್ರಿಕ ವಿಷಯಗಳ ಪರಿಭಾಷೆಯಲ್ಲಿ ಪ್ರಯೋಗಗಳನ್ನು ಮಾಡಲು RSF ಪ್ರೋತ್ಸಾಹಿಸುತ್ತದೆ.

ಸ್ಪರ್ಧೆಗಳು:

ಈ ಚಲನಚಿತ್ರೋತ್ಸವವು ಕಿರುಚಿತ್ರಗಳಿಗಾಗಿ - ಸ್ಪರ್ಧೆಗಳು ಪ್ರಾದೇಶಿಕ ಮಟ್ಟದಲ್ಲಿ ನಡೆಯಲಿವೆ. ಪ್ರಶಸ್ತಿಗಳನ್ನು 7 ಪ್ರಾದೇಶಿಕ ಭಾಷೆ
ಹಿಂದಿ ಬಾಂಗ್ಲಾ ಮರಾಠಿ ತೆಲುಗು ತಮಿಳು ಕನ್ನಡ ಮಲಯಾಳಂಗಳಿಗೆ ಪ್ರತಿ ಭಾಷೆಯ ಅತ್ಯುತ್ತಮ ಚಲನಚಿತ್ರಗಳಿಗೆ ಪ್ರಶಸ್ತಿಯನ್ನು ನೀಡಲಾಗುವುದು.
ತೀರ್ಪುಗಾರರ ಮತ್ತು ವೀಕ್ಷಕರ ಆಯ್ಕೆಯ ಪ್ರಕಾರ ಚಲನಚಿತ್ರಗಳನ್ನು ಅವುಗಳ ಸ್ವಂತಿಕೆ ಮತ್ತು ಗುಣಮಟ್ಟದ ವಿಷಯವನ್ನು ಆಧರಿಸಿ ಆಯ್ಕೆ ಮಾಡಲಾಗುತ್ತದೆ.

ದಯವಿಟ್ಟು ನಿಮ್ಮ ವಿವರಗಳನ್ನು ಹಂಚಿಕೊಳ್ಳಿ, ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ