RAM-online-learning-Programs-acting-direction-screenwriting-production-India-in-7languages

ಕಾರ್ಯಕ್ರಮಗಳ ಅವಲೋಕನ

  • RAM ನಲ್ಲಿ ಕಲಿಕೆಯ ಮಾರ್ಗಗಳು
   

ಚಲನಚಿತ್ರ ತಯಾರಿಕೆಯು ಹಲವಾರು ಸೃಜನಶೀಲ ಮತ್ತು ತಾಂತ್ರಿಕ ಪ್ರತಿಭೆಗಳು ಕೂಡಿ ಸಿನಿಮಾ ಕಲ್ಪನೆ ಯನ್ನು ಸಾಕಾರಗೊಳಿಸುವ ಒಂದು ಸಾಮರಸ್ಯದ ಸಹಯೋಗವಾಗಿದೆ. RAM ನಲ್ಲಿ ನಮ್ಮೊಂದಿಗೆ ಸೇರಿ ಸಿನಿಮಾ ಕಲೆಯ ವಿವಿಧ ಅಂಶಗಳನ್ನು ಕರಗತ ಮಾಡಿಕೊಳ್ಳುವ ಪ್ರಯಾಣವನ್ನು ಪ್ರಾರಂಭಿಸಿ.

  • ಕಥೆ ಮತ್ತು ಚಿತ್ರಕಥೆ

   

ನಾವೆಲ್ಲರೂ ಕಥೆಗಳನ್ನು ಕೇಳುತ್ತೇವೆ, ಹೇಳುತ್ತೇವೆ ಮತ್ತು ಹಂಚಿಕೊಳ್ಳುತ್ತೇವೆ. ನೀತಿಕಥೆಗಳು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ ಮತ್ತು ನಮ್ಮ ಬಾಲ್ಯದ ನೆನಪುಗಳೊಂದಿಗೆ ಬಲವಾದ ಬಂಧವನ್ನು ಹೊಂದಿವೆ. ದೊಡ್ಡ ಪರದೆಯ ಮೇಲೆ ನಾವು ಸಿನಿಮಾದಲ್ಲಿ ನೋಡುವುದು ಕೂಡ ಕಥೆಗಳನ್ನೇ. ಕಾಲ್ಪನಿಕ ಪಾತ್ರಗಳ ಒಂದು ಹಂತದ ಅವರ ಜೀವನವು ಹೇಗೆ ನೆಡೆಯುತ್ತದೆ ಎಂಬುದರ ಕಥೆಗಳನ್ನು ನಾವು ಚಲನಚಿತ್ರಗಳಲ್ಲಿ ವೀಕ್ಷಿಸುತ್ತೆವೆ. ನಮ್ಮನ್ನು ಸಿನಿಮಾಗಳಲ್ಲಿ ಸೆರೆ ಹಿಡಿದಿಟ್ಟಿಕೊಳ್ಳುವುದು ಆ ಎರಡು ಗಂಟೆಗಳಷ್ಟು ಕಾಲ ನೆಡೆಯುವ ಆ ಕಥೆಯು ಹೇಗೆ ಮುಂದೆ ಸಾಗುತ್ತದೆ ಎಂಬುದಾಗಿರುತ್ತದೆ. ಇಲ್ಲಿ ಕಥೆ ಮತ್ತು ಚಿತ್ರಕಥೆ ಬರೆಯುವವರ ಪ್ರತಿಭೆ ಗಣನೆಯಲ್ಲಿರುತ್ತದೆ. ಚಲನಚಿತ್ರವು ಒಂದು ಸಣ್ಣ ಕಲ್ಪನೆಯಿಂದ ಮೊಳಕೆಯೊಡೆಯಬಹುದು ಆದರೆ ಆ ಕಲ್ಪನೆಯನ್ನು ಚಲನಚಿತ್ರದಲ್ಲಿ ಸಾಕಾರಗೊಳಿಸುವುದು ಸೃಜನಶೀಲ ಮತ್ತು ಶ್ಲಾಘನೀಯ ಪ್ರಕ್ರಿಯೆ. ಚಿಂತನಶೀಲವಾಗಿ ನಿರ್ವಹಿಸಿರುವ ನಮ್ಮ ಕಥೆ ಮತ್ತು ಚಿತ್ರಕಥೆಯ ಡಿಜಿಟಲ್ ಕೋರ್ಸ್‌ನಲ್ಲಿ, ನೀವು ಚಲನಚಿತ್ರಕ್ಕಾಗಿ ವೃತ್ತಿಪರ ಮತ್ತು ತಲ್ಲೀನಗೊಳಿಸುವ ಕಥೆ ಮತ್ತು ಚಿತ್ರಕಥೆಯನ್ನು ಬರೆಯುವ ಪ್ರತಿಯೊಂದು ಬಾಗದ ಬಗ್ಗೆ ಕಲಿಯುವಿರಿ.

RAM
  • ಡಿಜಿಟಲ್ ಫಿಲ್ಮ್ ಮೇಕಿಂಗ್

   

ಭಾರತದಲ್ಲಿ ಚಲನಚಿತ್ರಗಳಿಗೆ 100 ವರ್ಷಗಳ ಇತಿಹಾಸವಿದೆ. ಒಂದು ಶತಮಾನದಲ್ಲಿ ಚಲನಚಿತ್ರಗಳನ್ನು ನಿರ್ಮಿಸುವ ತಂತ್ರಜ್ಞಾನವು ಗಮನಾರ್ಹವಾಗಿ ವಿಕಸನಗೊಂಡಿದೆ. ಇಂದು ಸಿನಿಮಾ ಡಿಜಿಟಲ್ ಆಗಿದೆ. ಹಿಂದೆ, ಮಾನವಚಾಲಿತವಾಗಿದ್ದ ಚಲನಚಿತ್ರ ನಿರ್ಮಾಣದ ಪ್ರಕ್ರಿಯೆಗಳು ಈಗ ಸ್ವಯಂಚಾಲಿತವಾಗಿವೆ. ಆಗ ಬಹು ಉದ್ಯೋಗಿಗಳ ಅಗತ್ಯವಿದ್ದದ್ದು ಹಾಗು ದೀರ್ಘಾವಧಿಯ ಸಮಯ ಪಡೆಯುತ್ತಿದ್ದದ್ದು ಈಗ, ಒಬ್ಬ ವೃತ್ತಿಪರ ವ್ಯಕ್ತಿ ಮತ್ತು ಕೆಲವೇ ಗಂಟೆಗಳ ಅಗತ್ಯವಷ್ಟೆ ಬೇಕಿದೆ. ಇದೆಲ್ಲ ಹೇಗೆ ಸಾಧ್ಯವಾಯಿತು? ಉತ್ತರ ಡಿಜಿಟಲ್ ಫಿಲ್ಮ್ ಮೇಕಿಂಗ್. ನಮ್ಮ ಆನ್‌ಲೈನ್ ಡಿಜಿಟಲ್ ಚಲನಚಿತ್ರ ತಯಾರಿಕೆಯ ಕೋರ್ಸ್ ನಿಮಗೆ ನವ ಯುಗದ ಸಿನಿಮಾ ಮಾಡಲು ಎಲ್ಲಾ ಉದ್ಯಮ-ಪ್ರಮಾಣಿತ ಪ್ರಕ್ರಿಯೆಗಳು, ಪರಿಕರಗಳು ಮತ್ತು ತಂತ್ರಗಳನ್ನು ವಿಸ್ತಾರವಾಗಿ ಕಲಿಸುತ್ತದೆ.

RAM-online-free-direction-course-in-your-language-India
  • ನಿರ್ದೇಶನ


   

ಪ್ರತಿಯೊಂದು ಚಿತ್ರವು ಒಂದು ನಿರ್ದಿಷ್ಟವಾದ ನಿರ್ವಹಣಾ ಶೈಲಿ ಹಾಗು ತೆರೆಯ ಮೇಲೆ ಕಥೆ ಹೇಳುವ ರೀತಿ ಯನ್ನು ಹೊಂದಿದೆ. ಪ್ರತಿ ಚಿತ್ರದ ವಿಶಿಷ್ಟತೆಯು ಚಲನಚಿತ್ರ ನಿರ್ದೇಶಕರ ದೃಷ್ಟಿಯ ಫಲಿತಾಂಶವಾಗಿದೆ. ನಿರ್ದೇಶಕರು ಹಾಳೆಯ ಮೇಲೆ ಬರೆದ ಚಿತ್ರವನ್ನು ಮನದಲ್ಲಿ ದೃಶ್ಯೀಕರಿಸಿ ಮತ್ತು ಅದನ್ನು ವಾಸ್ತವಕ್ಕೆ ತರಲು ಎಲ್ಲಾ ಎಳೆಗಳನ್ನು ಒಟ್ಟಿಗೆ ಜೋಡಿಸುತ್ತಾರೆ. ನಿರ್ದೇಶನವು ತಾಂತ್ರಿಕ-ಸೃಜನಶೀಲ ಕ್ಷೇತ್ರವಾಗಿದೆ. ನಿರ್ದೇಶಕರು ಸಿನಿಮಾ ಮಾಡುವಾಗ ಪ್ರತಿ ಸಣ್ಣ ಮತ್ತು ದೊಡ್ಡ ಚಟುವಟಿಕೆಯನ್ನು ನೋಡಿಕೊಳ್ಳಬೇಕು. RAM ನಲ್ಲಿ ಡೈರೆಕ್ಷನ್‌ನ ಡಿಜಿಟಲ್ ಕೋರ್ಸ್ ನಿಮ್ಮನ್ನು ಎಲ್ಲಾ ರೀತಿಯ ಕೆಲಸ ಮಾಡಬಲ್ಲ ಮತ್ತು ನಿರ್ದೇಶನದ ತಜ್ಞ ಆಗಲು ಸಿದ್ಧಗೊಳಿಸುತ್ತದೆ.

RAM-Screenwriting-course-online-free-in-7Indian-languages
  • ನಟನೆ

   

ನಟನೆಯು ದೈಹಿಕ ಚಲನೆಗಳು, ಮುಖಭಾವಗಳು, ಭಾವನೆಗಳು ಮತ್ತು ಮನಸ್ಸಿನ ಉಪಸ್ಥಿತಿಯ ಮೂಲಕ ಅಭಿವ್ಯಕ್ತಿಸುವ ನೈಜ ಪ್ರದರ್ಶನವಾಗಿದೆ. ನಟನೆ ಎಂದರೆ ಕಾಲ್ಪನಿಕ ಸಂದರ್ಭಗಳಲ್ಲಿ ಪ್ರಮಾಣಿಕವಾಗಿ ಬೇರೊಬ್ಬರ ಜೀವನವನ್ನು ಜೀವಿಸುವುದು . ನಟನೆಯು ನಿಮ್ಮ ದೇಹ ಮತ್ತು ಮನಸ್ಸಿನ ಮೂಲಕ ವ್ಯಕ್ತವಾಗುತ್ತದೆ. ನಟನೆಯು ತಪ್ಪಾಗಿ ಗ್ಲಾಮರ್, ಸೌಂದರ್ಯ ಮತ್ತು ಮಾರುಕಟ್ಟೆ ಮೌಲ್ಯ ದ ಸ್ಪರ್ಧೆಗಳೊಂದಿಗೆ ಸಂಬಂಧಿಸಿರುವ ಈ ಜಗತ್ತಿನಲ್ಲಿ, ನೈಜವಾದ ನಟನಾ ಕಲೆಯನ್ನು ಕಲಿಯಿರಿ. ನಟನೆಯ ಕೌಶಲ್ಯವನ್ನು ಕಲಿತು, ಅದನ್ನು ಅಭ್ಯಾಸ ಮಾಡುವ ವಿಧಾನಗಳನ್ನು ಅರಿಯುವ ಮತ್ತು ಅದನ್ನು ಪರಿಪೂರ್ಣಗೊಳಿಸುವ ತಂತ್ರಗಳನ್ನು ನಮ್ಮ ಹೇಳಿ ಮಾಡಿಸಿದ ಡಿಜಿಟಲ್ ಕೋರ್ಸ್-ನಟನೆ ಇಲ್ಲಿ ತಿಳಿದುಕೊಳ್ಳಿ.

RAM-
  • ಚಲನಚಿತ್ರ ನಿರ್ಮಾಣ:

   

ಇದು ವ್ಯವಸ್ಥಿತ ಹಾಗು ಸಂಘಟಿತ ರೀತಿಯಲ್ಲಿ ಯೋಜನೆಯನ್ನು ರೂಪಿಸಿ ಅನುಷ್ಟಾನಗೊಳಿಸುವುದು. ನಿರ್ಮಾಣದಲ್ಲಿ ಹಲವಾರು ಭಾಗಗಳಿವೆ – ಚಿತ್ರೀಕರಣವನ್ನು ನಿಗದಿಪಡಿಸುವುದು ಹಾಗು ಅದಕ್ಕೆ ತಕ್ಕ ವ್ಯವಸ್ಥೆಯನ್ನು  ಮಾಡುವುದು, ಪೋಸ್ಟ್ ಪ್ರೊಡಕ್ಷನ್ ಕಾರ್ಯ, ಅಯವ್ಯಯ ಮೇಲ್ವಿಚಾರಣೆ ಮತ್ತು ಅವುಗಳ ಸಮನ್ವಯ ನಿರ್ವಹಣೆ ಇತ್ಯಾದಿ. ನಯವಾದ ಮತ್ತು  ಸುಗಮ ಪ್ರಕ್ರಿಯೆಗಾಗಿ, ಸೃಜನಶೀಲತೆಯಷ್ಟೆ ಅಲ್ಲದೆ ತಾಂತ್ರಿಕ ಮತ್ತು ವ್ಯವಹಾರಿಕ ಅಂಶಗಳನ್ನು ಕೂಡ ಅರ್ಥಮಾಡಿಕೊಳ್ಳುವ ಕೌಶಲ್ಯದ ಅಗತ್ಯವಿದೆ. RAM ನಲ್ಲಿನ ಚಲನಚಿತ್ರ ನಿರ್ಮಾಣದ ಪಠ್ಯಕ್ರಮವು, ಸಿನಿಮಾ ತಯಾರಿಕೆಯ ನೈಜ ಕಾರ್ಯವಿಧಾನಗಳ ಬಗ್ಗೆ ಉತ್ಸುಕರಾಗಿರುವವರಿಗೆ ಅತಿ ಸೂಕ್ತವಾಗಿದೆ. ಈ ಕೋರ್ಸ್ ನಿಮಗೆ ಈಗಿನ ಡಿಜಿಟಲ್ ಯುಗದಿಂದ ಬದಲಾಗಿರುವ ಸಿನಿಮಾ ನಿರ್ಮಾಣದ ಬೇಡಿಕೆಗಳು ಮತ್ತು ಸವಾಲುಗಳ ಬಗ್ಗೆ ಒಳನೋಟಗಳನ್ನು ನೀಡುತ್ತದೆ. ವಿದ್ಯಾರ್ಥಿಗಳು ಜಟಿಲ ಕಾರ್ಯವಿಧಾನದ ಪ್ರತಿಯೊಂದು ಅಂಶಗಳನ್ನು ಅರ್ಥಮಾಡಿಕೊಳ್ಳಲು ಬೇಕಾದ ವಿಶೇಷ ಮಾಹಿತಿ ಹಾಗೂ ನುರಿತ ಜ್ಞಾನದ ಭಂಡಾರವನ್ನು ಬಳಸಬಹುದು. RAMನಲ್ಲಿ ಉಚಿತವಾಗಿ ಆಧುನಿಕ ಮಾಧ್ಯಮ ನಿರ್ಮಾಣ ಕೋರ್ಸ್ ಅನ್ನು ಆನ್‌ಲೈನ್‌ನಲ್ಲಿ ಕಲಿಯಿರಿ

RAM-Screenwriting-course-online-free-in-7Indian-languages
  • ಚಿತ್ರ ನಿರ್ಮಾಣ - ಒಂದು ಸ್ಥೂಲ ಅವಲೋಕನ

   

ಸಿನೆಮಾಲೋಕದ ರೋಮಾಂಚಕ ಕಲೆಗಳನ್ನು ‘ರಾಮೋಜಿ ಅಕಾಡೆಮಿ ಆಫ್ ಮೂವೀಸ್’ ಇಲ್ಲಿಉತ್ಸುಕತೆಯಿಂದ ಅನ್ವೇಷಿಸಿ. ಸಿನೆಮಾ ನಿರ್ಮಾಣದ ವೈಜ್ಞಾನಿಕ ಪ್ರಕ್ರಿಯೆಯೊಂದಿಗೆ ನಿಮ್ಮ ದೂರದೃಷ್ಟಿಯನ್ನು ನಿಜವಾಗಿಸಿ, ಕಲ್ಪನೆಯ ಪಾತ್ರಗಳಿಗೆ  ತೆರೆಯಮೇಲೆ ಜೀವಕೊಡುವ ಕಲೆಯನ್ನು ಚೆನ್ನಾಗಿ ಅಭ್ಯಾಸಮಾಡಿ. ನಮ್ಮ ಸಂಸ್ಥೆಯಲ್ಲಿ ಚಿಕ್ಕಪುಟ್ಟ ಆಲೋಚನೆಗಳನ್ನು ತಲ್ಲೀನಗೊಳಿಸುವ  ಸಿನೆಮಾ ಆಗಿ ಪರಿವರ್ತಿಸಲು ಬೇಕಾದ ಸೃಜನಶೀಲ, ಆಡಳಿತಾತ್ಮಕ ಮತ್ತು ಕಮರ್ಷಿಯಲ್ ಅಂಶಗಳನ್ನು ಹೇಳಿಕೊಡುತ್ತೇವೆ. ಈ ಚಲನಶೀಲ ಸಿನೆಮಾ ಜಗತ್ತಿನಲ್ಲಿ ಚಿತ್ರನಿರ್ಮಾಣದ ನೈಪುಣ್ಯವನ್ನು ಗಳಿಸಿ. ಅದ್ಭುತ ಸಿನೆಮಾ ನಿರ್ಮಾತೃವಿಗೆ ಬೇಕಾದ ಜ್ಞಾನ ಸಂಪಾದಿಸಿ.

RAM-