ರಾಮೋಜಿ ಅಕಾಡೆಮಿ ಆಫ್ ಮೂವೀಸ್ (RAM) ಚಿತ್ರ ನಿರ್ಮಾಣದ ಬಹು ಆಯಾಮಗಳಲ್ಲಿ ಆಳವಾದ, ಸ್ವಯಂ-ಕಲಿಕೆಯುಕ್ತ ಮತ್ತು ಉಚಿತ ಆನ್‌ಲೈನ್ ಕೋರ್ಸ್‌ಗಳನ್ನು ನೀಡುವ ಡಿಜಿಟಲ್ ವೇದಿಕೆಯಾಗಿದೆ. ನಾವು ಮಮತೆಯಿಂದ RAM ಎಂದು ಕರೆಯುವ ಇದು ವಿಶ್ವದ ಅತಿದೊಡ್ಡ ಚಲನಚಿತ್ರ ನಗರ - ರಾಮೋಜಿ ಫಿಲ್ಮ್ ಸಿಟಿಯ ಉಪಕ್ರಮವಾಗಿದೆ.
RAM ಸ್ಪರ್ಧೆಗಳು - ಪ್ರತಿಭಾವಂತರಿಗೆ ಒಂದು ವೇದಿಕೆ
RAM ನಲ್ಲಿ, ನಾವು ಚಲನಚಿತ್ರದ ಸಮಗ್ರ ಜ್ಞಾನವನ್ನು ಇಂಗ್ಲಿಷ್ ಮತ್ತು ಏಳು ಭಾರತೀಯ ಭಾಷೆ - ಹಿಂದಿ, ಮರಾಠಿ, ತೆಲುಗು, ಮಲಯಾಳಂ, ತಮಿಳು, ಕನ್ನಡ ಮತ್ತು ಬಾಂಗ್ಲಾ ಗಳಲ್ಲಿ ಚಲನಚಿತ್ರ ತಯಾರಿಕೆಯ ಆಕಾಂಕ್ಷಿಗಳು ಮತ್ತು ಚಲನಚಿತ್ರ ಉತ್ಸಾಹಿಗಳಿಗೆ ನೀಡುತ್ತೇವೆ. RAM ನಿಮ್ಮನ್ನು ಪಠ್ಯಕ್ರಮವನ್ನು ಕರಗತ ಮಾಡಿಕೊಂಡ ನಂತರ ವೃತ್ತಿಪರವಾಗಿ ಚಲನಚಿತ್ರಗಳಲ್ಲಿ ಕೆಲಸ ಮಾಡಲು ರೂಪಿಸುತ್ತದೆ. RAM ಸೂಕ್ತ ಪ್ರತಿಭೆಗಳಿಗೆ ಸೂಕ್ತ ಅವಕಾಶವನ್ನು ಒದಗಿಸಬೇಕೆಂದು ನಂಬುತ್ತದೆ. RAM ಪ್ರಾಮಾಣಿಕ, ಕಠಿಣ ಪರಿಶ್ರಮಪಡುವ ಮತ್ತು ಮಹತ್ವಾಕಾಂಕ್ಷೆಯ ಮನಗಳನ್ನು ಕೈ ಹಿಡಿದು ಅವರ ವಯಸ್ಸು, ವೃತ್ತಿ ಹಾಗು ಹಿನ್ನೆಲೆಯನ್ನು ಲೆಕ್ಕಿಸದೆ ಚಿತ್ರರಂಗಕ್ಕೆ ದಾರಿ ತೋರಿಸುತ್ತದೆ. ಇಲ್ಲಿ ಉತ್ಸಾಹ ಮುಖ್ಯ !