ರಾಮೋಜಿ ಗ್ರೂಪ್ - ವಿಭಿನ್ನವಾಗಿರಲು ಬಯಸುತ್ತದೆ
ರಾಮೋಜಿ ಗ್ರೂಪ್ ಹೈದರಾಬಾದ್ ನಲ್ಲಿ ಪ್ರಧಾನ ಕಛೇರಿ ಹೊಂದಿರುವ ಬಹು ಆಯಾಮದ ಉದ್ಯಮ ಸಂಸ್ಥೆ. 60 ವರ್ಷದ ಈ ಸಂಸ್ಥೆಯು, ಉದ್ಯಮಲೋಕದಲ್ಲಿ ತನ್ನದೆ ಮಾನದಂಡಗಳನ್ನು ಸೃಷ್ಟಿಸಿ ಅತ್ಯಂತ ವೈವಿಧ್ಯಮಯ ಉದ್ಯಮ ಸಮೂಹಗಳಲ್ಲಿ ಒಂದಾಗಿ ಬೆಳೆದಿದೆ. ವ್ಯಾಪಕವಾದ ದೂರದೃಷ್ಟಿ ಮತ್ತು ತತ್ವಗಳ ಆಧಾರದಿಂದ ಮಾಧ್ಯಮ ಮತ್ತು ಮನರಂಜನೆ, ಚಲನಚಿತ್ರ ನಿರ್ಮಾಣ, ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ, FM ರೇಡಿಯೋ, ಆತಿಥ್ಯ, ಸಣ್ಣ ವ್ಯಾಪಾರ, ಆಹಾರ, ಹಣಕಾಸು ಸೇವೆಗಳು, ವಿಷಯಾಧಾರಿತ ಪ್ರವಾಸೋದ್ಯಮ, ಚಲನಚಿತ್ರ ನಿರ್ಮಾಣದ ಸಮಗ್ರ ಸೌಕರ್ಯ ಹೊಂದಿರುವ ವಿಶ್ವದ ಅತಿದೊಡ್ಡ ಸಿನಿಮಾ ಕಲಾಗಾರ ಸಂಕೀರ್ಣ, ಚಲನಚಿತ್ರ ಶಿಕ್ಷಣ ಮತ್ತು ಸ್ವಾಸ್ಥ್ಯ ಇತ್ಯಾದಿಗಳಲ್ಲಿ ಆವಿಷ್ಕಾರದ ಉತ್ಪನ್ನ ಮತ್ತು ಸೇವೆಗಳನ್ನು ನೀಡುವುದರ ಮೇಲೆ ಕೇಂದ್ರೀಕರಿಸಿದೆ.
RAM-Ramoji-Group-world-of-cinema-ushakiron-Movies-India
ಉಷಾಕಿರಣ್ ಮೂವೀಸ್ ವೃತ್ತಿಪರವಾಗಿ ನಿರ್ವಹಿಸಲ್ಪಡುತ್ತಿರುವ 40 ವರ್ಷ ಹಳೆಯ ಕಂಪನಿಯಾಗಿದ್ದು, 86 ಕ್ಕೂ ಹೆಚ್ಚು ಚಲನಚಿತ್ರಗಳನ್ನು ತನ್ನ ಖಾತೆಯಲ್ಲಿ ಹೊಂದಿದೆ. ಇದು ಪರಿಶುದ್ದ ಮನರಂಜನೆ ಮತ್ತು ಸಂದೇಶ-ಆಧಾರಿತ ವಿಷಯಗಳನ್ನು ಪ್ರಸ್ತುತಪಡಿಸುವಲ್ಲಿ ಹೆಸರುವಾಸಿಯಾಗಿದೆ. ರಾಮೋಜಿ ಫಿಲ್ಮ್ ಸಿಟಿಯು ಗಿನ್ನೆಸ್ ರೆಕಾರ್ಡ್ಸ್‌ನಿಂದ ಗುರುತಿಸಲ್ಪಟ್ಟ ವಿಶ್ವದ ಅತಿದೊಡ್ಡ ಸಿನಿಮಾ ಕಲಾಗಾರ ಸಂಕೀರ್ಣವಾಗಿದೆ ಮತ್ತು ಅತ್ಯಂತ ಸಮಗ್ರ ಮೂಲಸೌಕರ್ಯಗಳನ್ನೊಳಗೊಂಡಿರುವ ಸ್ಥಳಗಳು, ಚಿತ್ರೀಕರಣಕ್ಕೆ ಸಿದ್ಧವಾದ ಸೆಟ್‌ಗಳು, ನಿರ್ಮಾಣ ಸೌಲಭ್ಯಗಳು ಮತ್ತು ಇತರ ಅನೇಕ ಸೇವೆಗಳ ಬೆಂಬಲ ನೀಡುತ್ತದೆ. ಇಲ್ಲಿಯವರೆಗೆ 2600 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ. ರಾಮೋಜಿ ಫಿಲ್ಮ್ ಸಿಟಿಯು ಜನಪ್ರಿಯ ರಜಾ ಮತ್ತು ವಿರಾಮ ತಾಣವಾಗಿದೆ, ಇದು ಬೆರಗುಗೊಳಿಸುವ ವಿಧಾನಗಳು, ವಿಷಯವಿನ್ಯಾಸಿತ ಮತ್ತು ಸಂವಹನಾತ್ಮಕ ಆಕರ್ಷಣೆಗಳು, ಕಲಾಗಾರ ಪ್ರವಾಸ, ಪರಿಸರ ಪ್ರವಾಸ, ಬರ್ಡ್ ಪಾರ್ಕ್, ಬಟರ್‌ಫ್ಲೈ ಪಾರ್ಕ್, ದೈನಿಕ ನೇರ ಪ್ರದರ್ಶನಗಳು, ತೀವ್ರ ಕ್ರಿಯಾ ಸಾಹಸ ಪ್ರದರ್ಶನಗಳು, ಆಟಗಳು, ಸಾಹಸ, ಮೋಜಿನ ಸವಾರಿಗಳು, ಆಹಾರ ಆಲಯಗಳು, ದಾಸ್ತಾನು ಮಳಿಗೆಗಳು ಮತ್ತು ವಿಶಾಲ ವ್ಯಾಪ್ತಿಯ ಆಯ್ಕೆಗಳಿರುವ ಅತ್ಯುತ್ತಮ ಹೊಟೆಲ್ ಗಳಿಂದ ತುಂಬಿದೆ.
Ramoji-Group-quality-driven-entertainment
EFM ರೇಡಿಯೋ ಚಾನೆಲ್ ಸ್ಥಳೀಯ ಹಾಗೂ ಪ್ರಾದೇಶಿಕ ಸಾರವನ್ನು ಅತ್ಯಾಕರ್ಷಕ ಮತ್ತು ಸಕ್ರಿಯ ಸಂಮಿಶ್ರಣದ ಸಂವಾದಾತ್ಮಕ ವಿಷಯಗಳ ಮೂಲಕ ಸೆರೆಹಿಡಿಯುತ್ತದೆ. ವಿವಿಧ ಭಾರತೀಯ ಭಾಷೆಗಳಲ್ಲಿ ಮಕ್ಕಳಿಗೆ ಮೀಸಲಾಗಿರುವ ETV ಬಾಲ್ ಭಾರತ್ ಎಂಬ ದೂರದರ್ಶನ ಚಾನೆಲ್‌ಗಳ ಪ್ರತ್ಯೇಕ ಸಮೂಹವನ್ನು ರಾಮೋಜಿ ಗ್ರೂಪ್ ನಿರ್ವಹಿಸುತ್ತಿದೆ-. ಈ ಚಾನಲ್‌ಗಳು ಮಕ್ಕಳಿಗಾಗಿ ಆದರ್ಶ ವೇದಿಕೆಯಾಗಿರುವುದರ ಜೊತೆಗೆ ವಿನೋದ, ಮನರಂಜನೆ, ಜ್ಞಾನ ಮತ್ತು ಮಾಹಿತಿಯ ಪರಿಪೂರ್ಣ ಮಿಶ್ರಣವಾಗಿವೆ. OTT ತೆಲುಗು ಪ್ರಯತ್ನವಾದ, ETV ವಿನ್ ಎನ್ನುವುದು ಚಂದಾದಾರಿಕೆಯ ಮಾದರಿಯಲ್ಲಿ ಕೊಡಲಾಗುವ ದೈನಿಕ ದಾರವಾಹಿಗಳು, ಚಲನಚಿತ್ರಗಳು, ರಿಯಾಲಿಟಿ ಶೋಗಳು ಮತ್ತು ಇತರ ವಿಚಾರ ವಿಷಯಗಳನ್ನು ಒಳಗೊಂಡಿರುವ ಮಾಹಿತಿ-ಮನರಂಜನೆಯನ ವಿಶಾಲ ನಿಧಿಯಾಗಿರುತ್ತದೆ.
RAM-Ramoji-Group-Print-broadcast-digital-media-India
ಜನಪ್ರಿಯತೆ ಹಾಗೂ ವ್ಯಾಪ್ತಿ ಎರಡರಲ್ಲೂ ತನ್ನ ಸ್ಥಾನವನ್ನು ಮತ್ತೆ ಮತ್ತೆ ದೃಢಪಡಿಸಿಕೊಂಡಿರುವ ಅತಿ ಹೆಚ್ಚು ಪ್ರಸರಣ ಹೊಂದಿರುವ ತೆಲುಗು ದಿನಪತ್ರಿಕೆ ಈನಾಡು ಇಂದ ಹಿಡಿದು ಅಂತರರಾಷ್ಟ್ರೀಯ ಮಟ್ಟದಿಂದ ಅತೀ ಸ್ಥಳೀಯ ಮಟ್ಟದ ವರೆಗಿನ ಪ್ರಸ್ತುತ ವಿದ್ಯಮಾನಗಳನ್ನು ಸೆರೆಹಿಡಿಯುವ ಪ್ರಾದೇಶಿಕ ಉಪಗ್ರಹ ಸುದ್ದಿ ವಾಹಿನಿಗಳಾದ ETV ಆಂಧ್ರಪ್ರದೇಶ, ETV ತೆಲಂಗಾಣ ದವರೆಗೂ ರಾಮೋಜಿ ಗುಂಪಿನ ಮಾಧ್ಯಮ ಚಟುವಟಿಕೆಗಳು ಯಾವಾಗಲೂ ಆವಿಷ್ಕಾರ, ವಸ್ತುನಿಷ್ಠ ಪತ್ರಿಕೋದ್ಯಮ ಮತ್ತು ಪ್ರೇಕ್ಷಕರನ್ನು ಪರಿಣಾಮಕಾರಿ ರೀತಿಯಲ್ಲಿ ತಲುಪುವ ಸಾಮರ್ಥ್ಯದೊಂದಿಗೆ ಹೊಸ ಮಾನದಂಡಗಳನ್ನು ಸೃಷ್ಟಿಸಿವೆ. ETV ಭಾರತ್ ಇತ್ತೀಚಿನ ಡಿಜಿಟಲ್ ಉದ್ಯಮವಾಗಿದ್ದು, 28 ​​ಭಾರತೀಯ ರಾಜ್ಯಗಳ ಸುದ್ದಿಗಳನ್ನು ಮಿಸಲಿಟ್ಟ ಅಪ್ಲಿಕೇಶನ್‌ಗಳು ಮತ್ತು ಪೋರ್ಟಲ್‌ಗಳ ಸಹಾಯದಿಂದ ಸೆರೆಹಿಡಿದು ಇಂಗ್ಲಿಷ್ ಸೇರಿದಂತೆ 12 ಪ್ರಮುಖ ಭಾರತೀಯ ಭಾಷೆಗಳಲ್ಲಿ ತಲುಪಿಸಲಾಗುತ್ತಿದೆ.
RAM-Ramoji-Group-Hyderabad-telangana-India
ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಗಳಿಸಿ ಡಾಲ್ಫಿನ್ ಹೊಟೇಲ್ಸ್ ವಿಶಾಖಪಟ್ಟಣ ಆಂಧ್ರಪ್ರದೇಶದಲ್ಲಿ ಮತ್ತು ರಾಮೋಜಿ ಫಿಲ್ಮ್ ಸಿಟಿ ಹೈದರಾಬಾದ್‌ನಲ್ಲಿ ವಿವಿಧ ಬಜೆಟ್ ಮತ್ತು ಐಷಾರಾಮಿ ಹೋಟೆಲ್‌ಗಳನ್ನು ನಿರ್ವಹಿಸುವ ಮೂಲಕ ಅತ್ಯುತ್ತಮವಾದ ಮತ್ತು ವಿಷಯಾಧಾರಿತ ಆತಿಥ್ಯವನ್ನು ನೀಡುತ್ತಿದೆ. ಪ್ರಿಯಾ ಫುಡ್ಸ್ ಎಂಬುದು ಮತ್ತೊಂದು ಮನೆಮಾತಾಗಿರುವ, ಭಾರತೀಯ ಅಡುಗೆಮನೆಗೆ ನೈಜ ಮತ್ತು ಸಾಂಪ್ರದಾಯಿಕ ರುಚಿಯನ್ನು ನೀಡಲು, ಉಪ್ಪಿನಕಾಯಿ, ಪುಡಿಗಳು, ಮಸಾಲಾಗಳು, ತಿನ್ನಲು ಸಿದ್ಧವಾಗಿರುವ ತಿಂಡಿಗಳು, ತ್ವರಿತ ಮಿಶ್ರಣಗಳು ಅಥವಾ ಸರಕು ಮತ್ತು ಸಿರಿಧಾನ್ಯಗಳಿಂದ ಆಯ್ಕೆ ಮಾಡಲು ಅದಮ್ಯ ಪಟ್ಟಿಯನ್ನು ಇಟ್ಟಿದೆ. ಕಲಾಂಜಲಿ, ಸಣ್ಣ ಉದ್ಯಮವು ಭಾರತದ ವಿವಿಧ ನಗರಗಳಾದ್ಯಂತ ಇರುವ ಶೋರೂಮ್‌ಗಳಲ್ಲಿ ಉತ್ತಮವಾದ ಮತ್ತು ಎಚ್ಚರಿಕೆಯಿಂದ ಆರಿಸಿದ ಕಲಾಕೃತಿಗಳು, ಕರಕುಶಲ ವಸ್ತುಗಳು ಮತ್ತು ಕೈಮಗ್ಗಗಳ ಭಂಡಾರವನ್ನು ಪ್ರಸ್ತುತಪಡಿಸುತ್ತದೆ. ಸುಖಿಭವ, ಸಮಗ್ರ ಸ್ವಾಸ್ಥ್ಯ ಕೇಂದ್ರವು ಪರ್ಯಾಯ ಮತ್ತು ಸಾಂಪ್ರದಾಯಿಕ ಚಿಕಿತ್ಸೆಗಳು ಸೇರಿದಂತೆ ಸ್ವಾಸ್ಥ್ಯ ಕಾರ್ಯಕ್ರಮಗಳ ಸಮಗ್ರ ಸಂಪುಟವನ್ನು ನೀಡುತ್ತದೆ.